ಸುನೀತಾ ವಿಲಿಯಮ್ಸ್

ಸುನೀತಾ ವಿಲಿಯಮ್ಸ್

‘ಹ್ಯಾಪಿ ಬರ್ತ್ಡೇ, ಸುನೀತಕ್ಕ”. ನಿಮ್ಮ ಹುಟ್ಟಿದ ದಿನ ಸೆಪ್ಟೆಂಬರ್ 19, 1965 ಅಂತ ಗೊತ್ತಾಯ್ತು. ನಿಜ, ನಿಮಗೆ ನಾವು ಯಾರು ಅಂತ ಗೊತ್ತಿರಲಿಕ್ಕಿಲ್ಲ. ಆದರೆ ಭಾರತೀಯತೆ ನಿಮ್ಮ ಹೃದಯದಲ್ಲಿ ಸಂವೇದಿಸುತ್ತಿರುವುದರಿಂದ, ನಿಮಗೆ ಭಾರತೀಯರಾದ ನಮ್ಮೆಲ್ಲರಲ್ಲಿ ಪ್ರೀತಿ ತುಂಬಿಹರಿಯುತ್ತಿದೆ ಎಂದು ನಮ್ಮ ಹೃದಯಗಳು ಅರಿತಿವೆ.

ವಿಜ್ಞಾನಿಗಳು ಅಂದರೆ, ಅದರಲ್ಲೂ ನಾಸಾ, ಇಸ್ರೋದಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವವರೆಂದರೆ ನಮಗೆ ಎಲ್ಲಿಲ್ಲದ ಗೌರವ. ನಮ್ಮ ವಿಕ್ರಂ ಸಾರಾಭಾಯಿ, ಪ್ರೊ. ಯು. ಆರ್. ರಾವ್. ರಾಜಾ ರಾಮಣ್ಣ, ಸಿ. ಎನ್. ಆರ್. ರಾವ್, ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ ಮುಂತಾದವರ ಹೆಸರು ಕೇಳಿದರೆ ನಮಗೆ ಗೌರವ ಮೂಡುತ್ತೆ. ಕಿರಿಯರಾದರೂ ನಿಮ್ಮ ಬಗ್ಗೆ ನಮಗೆ ಗೌರವ ಮೂಡುತ್ತದೆ ಸುನೀತಾ.

ಪಕ್ಕದೂರಿಗೆ ಹೋಗಿ ಬಂದ್ರೆ ನಮಗೆಲ್ಲಾ ಮೈಕೈ ನೋವು. ಆದರೆ ಬಾಹ್ಯಾಕಾಶದಲ್ಲಿ ಮೊದಲಬಾರಿಗೆ ಹೋದಾಗ 195ದಿನಗಳ ಕಾಲ ಬಹಳಷ್ಟು ವೇಳೆ ಒಬ್ಬಂಟಿಯಾಗಿ ಇದ್ರಿ. ಎರಡನೇ ಬಾರಿ ಹೋಗಿ ಸಹಾ 127 ದಿನ ಇರುವುದರ ಜೊತೆಗೆ ಬಾಹ್ಯಾಕಾಶದಲ್ಲಿ ಒಟ್ಟಾರೆ 50 ಗಂಟೆ 40 ನಿಮಿಷಗಳ ನಡಿಗೆಯನ್ನು ಮಾಡಿದಂತಹ ಸಾಧನೆ ಮಾಡಿದ್ರಿ. ಇಂಥಹ ಸಾಧನೆ ಮಾಡಿದ ಮಹಿಳೆಯರಲ್ಲಿ ತಾವೊಬ್ಬರೇ. ಒಟ್ಟಾರೆಯಾಗಿ ಸಹಾ ಇಷ್ಟೊಂದು ಸಾಧನೆ ಮಾಡಿದ ಬೆರಳೆಣಿಕೆಯ ಜನರಲ್ಲಿ ನೀವೊಬ್ಬರು. ಅಂತಾರಾಷ್ಟ್ರೀಯ ಅಂತರಿಕ್ಷ ಧಾಮ(ಐಎಸ್‌ಎಸ್)ದ ನಿಯಂತ್ರಣದ ಹೊಣೆಯನ್ನು ಹೊತ್ತಿದ್ದಿರಿ. ಅಲ್ಲಿ ಹೋಟೆಲ್ ಇಲ್ಲ, ಸಿನಿಮಾ ಇಲ್ಲ, ಶಾಪಿಂಗ್ ಇಲ್ಲ. ವಾವ್. ಅದು ಹೇಗೆ ನಿಮಗೆ ಅಲ್ಲಿ ಇರಲಿಕ್ಕೆ ಸಾಧ್ಯವಾಯ್ತು ಸುನೀತಕ್ಕ! ಇದು ನಿಮಗೆ ನಿಮ್ಮ ಕೆಲಸದಲ್ಲಿ ಇರುವ ಶ್ರದ್ಧೆಯನ್ನು ತೋರುತ್ತೆ. ಪ್ರೀತಿಯನ್ನು ತೋರುತ್ತೆ. ಲೋಕದಲ್ಲಿ ಕೋಟ್ಯಾನುಕೋಟಿ ಜನರ ಮಧ್ಯದಲ್ಲಿ ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ನೀವು ಆಯ್ಕೆಯಾದಿರಿ ಅಂದರೆ ಅದು ನಿಮ್ಮ ಬಗ್ಗೆ ಇನ್ನೂ ಬಹಳಷ್ಟು ಹೇಳದಿರುವುದಿದೆ ಎಂದು ನಮ್ಮ ಹೃದಯಗಳು ಹೇಳುತ್ತವೆ. ಇದಕ್ಕೆ ಮುಂಚೆ ತಾವು ಸೈನ್ಯದಲ್ಲಿ ಅಧಿಕಾರಿಯಾಗಿ ಸಹಾ ಕಾರ್ಯನಿರ್ವಹಿಸಿದ ಸಾಧಕರಾಗಿದ್ರಿ.

ಸುನೀತಕ್ಕ ಮತ್ತೊಂದು ವಿಚಾರ. ನಾವು ಪಟ್ಟಣದಲ್ಲಿ ಇದ್ದೀವಿ ಅಂತ ಪೊಗರಿನಲ್ಲಿ, ನಾವು ನಮ್ಮ ಸಂಸ್ಕೃತಿಯನ್ನೆಲ್ಲಾ ಬಿಟ್ಟು, ನಮ್ಮನ್ನು ಬಿಟ್ಟರೆ ಬೇರೆ ಪಾಶ್ಚಾತ್ಯರಿಲ್ಲ ಎಂದು ಬದುಕುತ್ತೇವೆ. ನೀವು ಅಮೇರಿಕದಲ್ಲಿ ಓದಿ, ಬೆಳೆದು, ಅಲ್ಲೇ ನಿಮ್ಮ ಜೀವನವನ್ನು ಸವೆಸಿದ್ದರೂ, ಭಾರತೀಯತೆಯನ್ನು ಭಗವದ್ಗೀತೆ ಪುಸ್ತಕ ರೂಪದಲ್ಲಿ, ಗಣಪತಿ ವಿಗ್ರಹಗಳ ರೂಪದಲ್ಲಿ, ಗಾಂಧೀವಾದದ ಸರ್ವಹಿತಚಿಂತನೆಯಲ್ಲಿ, ಕಲ್ಪನಾ ಚಾವ್ಲಾ ಎಂಬ ಸಾಹಸಿಯ ಹೃದಯರೂಪದಲ್ಲಿ ಬಾಹ್ಯಾಕಾಶಕ್ಕೂ ತೆಗೆದುಕೊಂಡು ಹೋಗಿದ್ದಿರಿ ಎಂಬುದು ಎಲ್ಲೆಡೆ ಓದಿದಾಗ ಅದೆಷ್ಟು ಸಂತಸವಾಯ್ತು ಗೊತ್ತಾ.

ಭಾರತಕ್ಕೆ ನೀವು ಬಂದು ಹೋದಾಗ ಇಲ್ಲಿನ ಜನ ನಿಮ್ಮ ಮೇಲೆ ಪ್ರೀತಿ ತೋರಿದಾಗ “ನನಗೆ ಗಾಂಧೀ ಅವರು ಆದರ್ಶ, ಕಲ್ಪನಾ ಚಾವ್ಲಾ ಬಗ್ಗೆ ಗೌರವ” ಎಂದು ಹೇಳಿದ ನಿಮ್ಮ ನುಡಿ ನಮಗೆ ನಮ್ಮನ್ನು ನಾವೇ ಸ್ವಲ್ಪ ಒಳಗೇ ನೋಡಿಕೊಳ್ಳುವಂತೆ ಪ್ರೇರೇಪಿಸಿತು.

ಸುನೀತಕ್ಕ, ನಿಮಗೆ ಬಾಹ್ಯಾಕಾಶದಲ್ಲೇ ಹೆಚ್ಚು ಇದ್ದು ಅಭ್ಯಾಸವಾಗಿ ಹೋಗುತ್ತಿದೆ. ನಮ್ಮ ಬೆಂಗಳೂರಿನ ಟ್ರಾಫಿಕ್ನಲ್ಲಿ ಓಡಾಡೋದಕ್ಕಿಂತ ಬಾಹ್ಯಾಕಾಶದಲ್ಲಿ ಓಡಾಡೋದೇ ಸುಲಭ ಅಂತಾನ? ತಮಾಷೆ ಮಾಡ್ದೆ ಸುನೀತಕ್ಕ. ಇಂತಹ ಕೆಲಸ ಎಷ್ಟೊಂದನ್ನ ಬೇಡುತ್ತೆ ಅಂತ ನಾವು ಸ್ವಲ್ಪ ಮಾತ್ರ ಊಹಿಸಬಲ್ಲೆವು. ನೀವು ಇನ್ನೂ ಹೆಚ್ಚಿನ ಮಹತ್ವದ ಸಾಧನೆ ಮಾಡುತ್ತೀರಿ ಎಂದು ನಮಗೆ ತಿಳಿದಿದೆ. ನೀವು ನಮ್ಮ ಭಾರತದ ಯುವ ಹೃದಯಗಳನ್ನು ಹೆಚ್ಚಿನದನ್ನು ಸಾಧಿಸುವುದಕ್ಕೆ ಪ್ರೇರೇಪಣೆ ಒದಗಿಸುತ್ತೀರಿ ಎಂಬ ವಿಶ್ವಾಸ ಕೂಡ.

ನಿಮ್ಮ ಬದುಕು ಸುಂದರವಾಗಿರಲಿ ಸುನೀತಕ್ಕ. ನಿಮ್ಮ ನಗೆಮೊಗ ನೋಡಿದಾಗಲೆಲ್ಲ ನಮಗೆ ಸಂತಸ ಉಕ್ಕಿ ಹರಿಯುತ್ತೆ. ನಿಮ್ಮ ನಗೆ ಶಾಶ್ವತವಾಗಿರಲಿ. ನಿಮ್ಮ ಯಶಸ್ಸಿನ ನಗುಮೊಗ ನಮ್ಮೆಲ್ಲರಿಗೂ ಬೆಳಕು ತುಂಬುತ್ತಿರಲಿ. ಹ್ಯಾಪಿ ಬರ್ತ್ಡೇ ಸುನೀತಕ್ಕ.

Advertisements

10 Steps To Success

10 Steps To Success:

1. Try
2. Try again
3. Try once more
4. Try it a little differently
5. Try it again tomorrow
6. Try and ask for help
7. Try to find someone who’s done it
8. Try to determine what is not working
9. Try to determine what is working
10. Just keep trying

ಮಗನಾ ? ಮಗಳಾ?

ಮಗ ಮಗಳು
ಯಾರು ಶ್ರೇಷ್ಠ
ಮಗ.ಬುದ್ದಿ
ಮಗಳು.ಸಮೃಧ್ಧಿ
ಮಗ.ಪ್ರೀತಿ
ಮಗಳು.ವಾತ್ಯಲ್ಶ
ಮಗ.ಧಣಿ
ಮಗಳು.ಧ್ವನಿ
ಮಗ.ಮನೆತನ
ಮಗಳು.ಮರ್ಯಾದೆ
ಮಗ.ಧೈರ್ಯ
ಮಗಳು.ಐಶ್ವರ್ಯ
ಮಗ.ಸಿಹಿ
ಮಗಳು.ಮಧುರ
ಮಗ.ಝೇಂಕಾರ
ಮಗಳು.ಮಮಕಾರ
ಮಗ.ಇಂಪು
ಮಗಳು.ತಂಪು
ಮಗ.ಸೊಬಗು
ಮಗಳು.ಸೌಂದರ್ಯ
ಮಗ.ದೃಷ್ಟಿ
ಮಗಳು.ಸೃಷ್ಟಿ
ಮಗ.ಮದುವೆಯವರೆಗೆ
ಮಗಳು.ಕೊನೆಯವರೆಗೆ

ಶ್ರಮವೇ ಜೀವನ

ಹನಿಯಾಗಿ..
ನೀರಾಗಿ..
ಸಣ್ಣ ತೊರೆಯಾಗಿ..
ಒಂಟಿಯಾದ ಝರಿಯಾಗಿ..
ಹಳ್ಳವಾಗಿ.. ಕೊಳ್ಳವಾಗಿ…
ಬಳಕುವ ನದಿಯಾಗಿ..

ಒಮ್ಮೆಲೆ ಪ್ರಪಾತಕ್ಕೆ ಬಿದ್ದಾಗಲೇ
ನಾವು ಎಲ್ಲರೂ ತಲೆಯೆತ್ತಿ ನೋಡುವಂತ #ಜಲಪಾತ ಆಗುವುದು..!

ಜೀವನ ಬೀಗುವುದಲ್ಲ…
ಬಿದ್ದರೂ ನಮ್ಮನ್ನು ತಲೆಯೆತ್ತಿ ನೋಡುವಂತೆ ಬಾಗುವುದು…!

ಪ್ರತಿಯೊಬ್ಬರ ಬದುಕಲ್ಲೂ ಹೇಳಲಾಗದ ಒಂದೊಂದು ಕಥೆ ಇರುತ್ತದೆ…!!!

ಪ್ರತಿಯೊಬ್ಬರ ಬದುಕಲ್ಲೂ
ಹೇಳಲಾಗದ ಒಂದೊಂದು
ಕಥೆ ಇರುತ್ತದೆ…!!!

ಕೆಲವರು
ಸಂತೋಷದ ಕಣ್ಣೀರಿನಲ್ಲಿ
ಮುಚ್ಚಿಟ್ಟರೆ…!!!

ಇನ್ನೂ ಕೆಲವರು
ನೋವಿನ ನಗೆಯಲ್ಲಿ
ಬಚ್ಚಿಡ್ತಾರೆ…!!!

ಹಾಸ್ಯ

ಇಂದು ಬೆಳಗ್ಗೆ ಬಸ್ ನಲ್ಲಿ
ಗಂಡ: ಶಾಂತಿ ,ಶಾಂತಿ , ಶಾಂತಿ ಎಲ್ಲಿದ್ದೀಯಾ ಎಂದು ಅವನ ಹೆಂಡತಿಯನ್ನು ಕರೆಯಲಾರಂಭಿಸಿದ
ಹಂಡತಿ: ನಾನು ಮುಂದೆ ಇದ್ದೀನಿ,ಏನು ರೀ , ಹೇಳ್ರೀ,
ಗಂಡ: ಎನಿಲ್ಲ,ಎಲ್ಲಿಗೆ ಹೋಗಬೇಕು ಶಾಂತಿ
ಹೆಂಡತಿ: ಶಾಂತಿನಗರ ರೀ,
😀😁😁😁😀😀😀
#Electroniccitybmtcbus

ಕರುನಾಡ ತಾಯಿಗೆ ನನ್ನೀನಮನ

ಭಾವನೆಗಳ ಅಂಚಿನಲ್ಲಿ ನನ್ನೀಮನದ ಉಸಿರು, ಹಸಿರನ್ನಪೇಕ್ಷಿಸುತ್ತಾ ಜೀವನದ ಮರುಚಿಗುರಿಗೆ ಕಾತರಿಸುತ್ತಿದೆ,ಎಲೆ ಪಕ್ಷಿ,ಪ್ರಾಣಿ,ವನ,ಹಾಗೂ ನಿತ್ಯಧಾರೆಯಾಗಿ ನೆಲೆಸಿದ ಕಾವೇರಿ ಪೋಷಿತಭರಿತಳಾಗಿ ನಮ್ಮೆಲ್ಲರನ್ನು ಸಲಹುತ್ತಿರುವ ಜಗಜ್ಜನನಿ ಭುವನೇಶ್ವರಿ ಮಾತೆ ನಮ್ಮೀಜನರ, ನಾಡಿಗಾಗಿ,ನಾಡಿನ ಒಳಿತಿಗಾಗಿ ಸದಾ ಆಶೀರ್ವದಿಸು ಕನ್ನಡತಾಯೇ

– ರಾಜೇಶ್

ಆದಿಗೊಂಡನಹಳ್ಳಿ